ಆಸಾನಿ ಚಂಡಮಾರುತದ ಪರಿಣಾಮ ಉಡುಪಿ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಮಳೆ ಬರುತ್ತಿದೆ. ಹೊರರಾಜ್ಯ ಹೊರಜಿಲ್ಲೆಯ ಪ್ರವಾಸಿಗರಿಗೆ ಅಕಾಲಿಕ ಮಳೆ ನಿರಾಶೆ ತಂದಿದೆ. ಮಲ್ಪೆ ಕಡಲ ತೀರದ ವಾಟರ್ ಸ್ಪೋಟ್ರ್ಸ್ ಬಂದ್ ಮಾಡಲಾಗಿದೆ. ಅರಬ್ಬಿಸಮುದ್ರ ಪ್ರಕ್ಷುಬ್ಧವಾಗಿದ್ದರೂ ಲೈಫ್ ಗಾರ್ಡ್ ಗಳ ಸೂಚನೆಯನ್ನು ಲೆಕ್ಕಿಸದೆ ಜನ ಸಮುದ್ರಕ್ಕೆ ಇಳಿಯುತ್ತಿದ್ದಾರೆ. ಪ್ರವಾಸೋದ್ಯಮ ಇಲಾಖೆಯ ಕಟ್ಟೆಚ್ಚರ ವನ್ನು ಮೀರುತ್ತಿದ್ದಾರೆ. ಈ ಬಗ್ಗೆ ನಮ್ಮ ಉಡುಪಿ ಪ್ರತಿನಿಧಿ ದೀಪಕ್ ಜೈನ್ ನಡೆಸಿರುವ ವಾಕ್ ಥ್ರೂ ಇಲ್ಲಿದೆ.
#PublicTV #AsaniCyclone #Udupi